James 4

ಜಗಳಗಂಟಿತನ, ಪ್ರಾಪಂಚಿಕಬುದ್ಧಿಯ ವಿಷಯವಾಗಿ ಎಚ್ಚರಿಕೆ

1ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಿಂದ ಪ್ರಚೋದಿಸಲ್ಪಡುವ
4:1 ಅಥವಾ. ದಂಡಿಳಿದಿರುವ. ರೋಮಾ. 7:23; 1 ಪೇತ್ರ. 2:11:
ಹೋರಾಡುವ ಮನೋಭಾವ ದುರಾಶೆಗಳಿಂದ ಬರುತ್ತವಲ್ಲವೇ?
2ನೀವು ಬಯಸಿದ್ದು ಹೊಂದದೆ ಇದ್ದೀರಿ. ನೀವು ಕೊಲೆ ಮಾಡಿದರೂ, ಹೊಟ್ಟೆಕಿಚ್ಚುಪಟ್ಟರೂ ಬಯಸಿದ್ದನ್ನು ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ನಿವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ. 3ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ
4:3 1 ಯೋಹಾ. 5:14:
ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ.

4
4:4 ಯೆಶಾ. 54:5; ಯೆರೆ. 2:20:
ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ
4:4 ಯೋಹಾ. 15:19; 1 ಯೋಹಾ. 2:15. ಮತ್ತಾ 6:24:
ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.
5
4:5 1 ಕೊರಿ. 6:19; 2 ಕೊರಿ. 6:16:
ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನ ನಿರೀಕ್ಷೆಯೊಂದಿಗೆ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ?

6
4:6 ಯೆಶಾ. 54:7, 8; ಮತ್ತಾ 13:12:
ಆತನು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದುದರಿಂದ, <<
4:6 ಜ್ಞಾ. 3:34; 1 ಪೇತ್ರ. 5:5; ಕೀರ್ತ. 138:6; ಮತ್ತಾ 23:12; 2 ಕೊರಿ. 7:6:
ದೇವರು ಅಹಂಕಾರಿಗಳಿಗೆ ಎದುರಾಳಿಯಾಗಿದ್ದಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ>> ಎಂದು ಧರ್ಮಶಾಸ್ತ್ರವು ಹೇಳುತ್ತದೆ.
7ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು
4:7 1 ಪೇತ್ರ. 5:8, 9; ಎಫೆ. 4:27; 6:11:
ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು.

8
4:8 2 ಪೂರ್ವ. 15:2; ಜೆಕ. 1:3; ಮಲಾ. 3:7; ಲೂಕ. 15:20:
ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ,
4:8 ಯೆಶಾ. 1:16:
ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ,
4:8 ಯೆರೆ. 4:14:
ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ.
9
4:9 ಮತ್ತಾ 5:4:
ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಕರ್ತನ ಕೃಪೆಗಾಗಿ ಗೋಳಿಟ್ಟು ಬೇಡಿಕೊಳ್ಳಿ. ನಿಮ್ಮ ಲೌಕಿಕ ಸಂತೋಷವನ್ನು ಬಿಟ್ಟು ಕರ್ತನನ್ನು ಪಡೆಯಲು ಪ್ರಯತ್ನಿಸಿ.
10
4:10 ವ. 6; ಯೆಶಾ. 57:15. ಮತ್ತಾ 23:12; ಲೂಕ. 14:11; 18:14; 1 ಪೇತ್ರ. 5:5, 6:
ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು.

11ಸಹೋದರರೇ,
4:11 2 ಕೊರಿ. 12:20; 1 ಪೇತ್ರ. 2:1; ಯಾಕೋಬ 5:9:
ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ
4:11 ಮತ್ತಾ 7:1; ಲೂಕ. 6:37; ರೋಮಾ. 14:13; 1 ಕೊರಿ. 4:5:
ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ.
12
4:12 ಯೆಶಾ. 33:22; ಯಾಕೋಬ. 5:9:
ಧರ್ಮಶಾಸ್ತ್ರವನ್ನು ಕೊಟ್ಟಂಥ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವುದಕ್ಕೂ
4:12 ಮತ್ತಾ 10:28:
ನಾಶಮಾಡುವುದಕ್ಕೂ ಸಮರ್ಥನು.
4:12 ರೋಮಾ. 14:4:
ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?

13
4:13 ಜ್ಞಾ. 27:1; ಲೂಕ. 12:18-20:
<<ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ>> ಎನ್ನುವವರೇ ಕೇಳಿರಿ.
14ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು?
4:14 ಕೀರ್ತ. 102:3; ಯೋಬ. 7:7:
ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ.

15ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು
4:15 ಅ. ಕೃ. 18:21:
<<ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು>> ಎಂದು ಹೇಳಬೇಕು.
16ಆದರೆ ನೀವು ನಿಮ್ಮ ಅಹಂನಿಂದ ನಿಮ್ಮಬಗ್ಗೆ ಹೊಗಳಿಕೊಳ್ಳುತ್ತೀರಿ.
4:16 1 ಕೊರಿ. 5:6:
ಅಂಥ ಹೊಗಳಿಕೆಯೆಲ್ಲಾ ದೇವರಮುಂದೆ ಕೆಟ್ಟದ್ದೇ.
ಹೀಗಿರುವುದರಿಂದ
4:17 ಯೋಹಾ 9:41; 15:22, 24; ಲೂಕ. 12:47, 48; 2 ಪೇತ್ರ. 2:21:
ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

17

Copyright information for KanULB